ಉಚಿತ ವೈದ್ಯಕೀಯ ಸೇವೆ

ಧರ್ಮಸ್ಥಳ:ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಯುಕ್ತ ತುರ್ತು ಉಚಿತÀ ವೈದ್ಯಕೀಯ ಸೇವೆಯನ್ನು ಧರ್ಮಸ್ಥಳದಲ್ಲಿ ನಿಡಲಾಗುತ್ತಿದೆ.
ದೈವಿಕ ಕಾರ್ಯಕ್ರಮಕ್ಕೆ ಹೆಚ್ಚು ಪ್ರಮಾಣದಲ್ಲಿ ಆಗಮಿಸುವ ಭಕ್ತಾದಿಗಳ ತುರ್ತು ಆರೋಗ್ಯ ಸಮಸ್ಯೆಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲು ಆಸ್ಪತ್ರೆಗಳನ್ನು ತರೆಯಲಾಗಿದೆ. ಮಧುಮೇಹದಂತಹ ಇನ್ನಿತರ ಅನಾರೋಗ್ಯದ ಸಮಸ್ಯೆಗಳಿಗೆ ಸೌಲಭ್ಯ ಒದಗಿಸಲಾಗುತ್ತದೆ.
ಈ ಸೇವೆಯನ್ನು ಉಜಿರೆಯ ಎಸ್.ಡಿ.ಎಂ. ಹಾಸ್ಪಿಟಲ್ ವೈದ್ಯರ ಪಾಲ್ಗುಳ್ಳುವಿಕೆಯಲ್ಲಿ ಈ ನಿಸ್ವಾರ್ಥ ಸೇವೆಯನ್ನು ನೀಡಲಾಗುತಿದ್ದು. ಈ ಆಸ್ಪತ್ರೆ ಆಯುರ್ವೇದಿಕ್ ಚಿಕಿತ್ಸೆ ಸೇವೆಯೂ ಸೇರಿದಂತೆ ಹಲವು ವಿಧದ ಉಚಿತ ಆರೋಗ್ಯ ಸೇವೆಗಳು ಲಭ್ಯವಿವೆ.
ಆರೋಗ್ಯೆ ಸೇವೆಯಲ್ಲಿ ಬೀನು ಜೋಷಿ ಹಾಗೂ ನಾಲ್ಕು ವೈದ್ಯರು ಮತ್ತು ಇಬ್ಬರು ಆಯುರ್ವೇದಿಕ್ ವೈದ್ಯರು ಒಳಗೊಂಡು ಎರಡು ಜನ ಶುಶ್ರೂಷಕಿಯರು ಸ್ವಚ್ಛತಾ ಸಿಬ್ಬಂದಿ ಸೇರಿ ಒಟ್ಟು 10 ಜನರ ತಂಡ ಚಿಕಿತ್ಸಾ ಸೇವೆಯನ್ನು ನೀಡುತಿದ್ದಾರೆ.
ಮಹತ್ವ ಕಾರ್ಯದಲ್ಲಿ ಸಂಸ್ಥೆಯ ಆಂಬ್ಯುಲೆನ್ಸ್ ಮತ್ತು ಎಸ್.ಡಿ.ಎಮ್. ಸಂಸ್ಥೆಯ ಮೊಬೈಲ್ ಆಸ್ಪತ್ರೆ ವಾಹನ ಸೇವೆÀ ಒದಗಿಸುತಿದ್ದು. ಬರುವ ಜನರ ಅನಾರೊಗ್ಯದ ಸಮಸ್ಯೆಗಳಿಗೆ ತುರ್ತು ಸಮಯದಲ್ಲಿ ಆರೋಗ್ಯ ಸೇವೆಯನ್ನು ನೀಡುತ್ತಿದ್ದಾರೆ. ಹೆಚ್ಚಿನ ವೈದ್ಯಕೀಯ ಸೌಲಭ್ಯಕ್ಕಾಗಿ ಉಜಿರೆಯ ಆಸ್ಪತ್ರೆಗೆ ಸಾಗಿಸಲು ಸರ್ಕಾರಿ 108 ಆಂಬ್ಯುಲೆನ್ಸ್ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಉಚಿತ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸಿದ ದಿನಕ್ಕೆ ಸಾಮಾನ್ಯ ರೋಗಿಗಳು ಸಂಖ್ಯೆ 25 ಇದೆ. ಇನ್ನೂಮುಂದಿನ ದಿನಗಳಲ್ಲಿ ಹಲವಾರು ಜನರಿಗೆ ಈ ತುರ್ತು ಆರೋಗ್ಯ ಸೌಲಭ್ಯ ದೊರೆಯಲಿದೆ. ಮಹಾಮಸ್ತಕಾಭಿಷೇಕದ ಸಮಯದಲ್ಲಿ ಈ ಸೇವೆ ರತ್ನಗಿರಿಯ ಬೆಟ್ಟದ ಮೇಲೆಯೂ ಸಿಗಲಿದೆ.
ಭಗವಾನ್ ಬಾಹುಬಲಿಯ ಮಹಾಮ್ತಕಾಭಿಷೇಕದ ಕೊನೆಯ ದಿನದವರೆಗೂ ಈ ಉಚಿತ ತುರ್ತು ಆರೋಗ್ಯ ಸೇವೆ ಬರುವ ಭಕ್ತಾದಿಗಳಿಗೆ ದೊರೆಯಲಿದೆ.
ವರದಿ:ಹೊನಕೇರಪ್ಪ ಸಂಶಿ
ಸ್ನಾತಕೋತ್ತರ ಪತ್ರಿಕೊದ್ಯಮ ವಿಭಾಗ ಎಸ್.ಡಿ.ಎಂ ಕಾಲೇಜು ಉಜಿರೆ