ರತ್ನಗಿಯಲ್ಲೊಂದು ಯಜ್ಞಶಾಲೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಸಂದÀರ್ಭದಲ್ಲಿ ಧಾರ್ಮಿಕ ವಿಧಿವಿಧಾನಗಳಿಗಾಗಿ ರತ್ನಗಿರಿ ಬೆಟ್ಟದಲ್ಲಿ ಯಜ್ಞಶಾಲೆ ನಿರ್ಮಾಣಗೊಂಡಿದೆ. ಜೈನ ಧರ್ಮದಲ್ಲಿ ಯಜ್ಞಶಾಲೆಗೆ ಅದರದ್ದೇ ಆದ ಮಹತ್ವವಿದೆ. ಇದು ಗುಡಿಸಲಿನಂತೆ ರೂಪುಗೊಂಡಿದ್ದು, ಭಕ್ತಾಧಿಗಳ ಗಮನಸೆಳೆಯುತ್ತಿದೆ.
ಪ್ರಾಚೀನತೆಯ ನೆನಪನ್ನು ಮರುಕಳಿಸುವಂತಹ ಶೈಲಿಯಲ್ಲಿ ರೂಪುಗೊಂಡಿದ್ದು, ಇದುಧಾರ್ಮಿಕ ಚಿಂತನೆಗಳಿಗೆ ಒಗ್ಗುವಂತ ವಾತಾವರಣವನ್ನು ಸೃಷ್ಠಿಸಿದೆ. ಬಿದಿರಿನ ವಿನ್ಯಾಸ, ಮುಳಿ ಹುಲ್ಲಿನ ಬಳಕೆ ಯಜ್ಞಶಾಲೆಯ ಮೆರುಗನ್ನು ಇಮ್ಮಡಿಗೊಳಿಸಿದೆ. ಯಜ್ಞಕುಂಡ, ತ್ಯಾಗಮೂರ್ತಿ ವಿಗ್ರಹ, ಮಂತ್ರೋದ್ಗಾರ ನೆರೆದಿದ್ದವರನ್ನು ಭಕ್ತಿ ಲೋಕಕ್ಕೆ ಕೊಂಡೊಯ್ಯುತ್ತಿದೆ.


ಮಹಾಮಸ್ತಕಾಭಿಷೇಕದ ಸಲುವಾಗಿ ರೂಪುಗೊಂಡಿರುವ ಈ ಯಜ್ಞಶಾಲೆಯಲ್ಲಿ ಪ್ರತಿದಿನವೂ ಪಂಚಕಲ್ಯಾಣದ ವಿಧಿವಿಧಾನಗಳು ನಡೆಯುತ್ತಿರುತ್ತವೆ. ಬಾಹುಬಲಿಯ ಹುಟ್ಟಿನಿಂದ ದೀಕ್ಷೆ ಪಡೆದವರೆಗಿನ ಐದು ಕಲ್ಯಾಣಗಳಿಗೆÀ ಸಂಬಂಧಪಟ್ಟ ಪೂಜಾ ಕೈಂಕರ್ಯಗಳು ಪ್ರತಿದಿನವೂ ಇಲ್ಲಿ ನಡೆಯುತ್ತವೆ. ಭಗವಾನ್ ಬಾಹುಬಲಿಯ ಸ್ಮರಣೆಯಲ್ಲಿ ಯಾಗಮಂಡಲ ಆರಾಧನೆ, ಯಕ್ಷಾರಾಧನೆ, ಸೇರಿದಂತೆ ಮೂರು ಆರಾಧನೆಗಳು ಪೂರ್ತಿಗೊಂಡಿವೆ. ಯಜ್ಞಶಾಲೆಯಲ್ಲಿ ಪ್ರತಿದಿನವೂ ಹೋಮ ಹವನಗಳು ನಡೆಯುತ್ತಿರುತ್ತವೆ. ಮಹಾಮಸ್ತಕಾಭಿಷೇಕದ ಹತ್ತು ದಿನವೂ ತ್ಯಾಗಮೂರ್ತಿಗೆ ವಿಶೇಷ ಪೂಜೆಗಳು ನಡೆಯುತ್ತವೆ.
-ದೀಕ್ಷಾ. ಬಿ, ದ್ವಿತೀಯ ಎಂ.ಸಿ.ಜೆ
ಎಸ್.ಡಿ.ಎಮ್ ಕಾಲೇಜು ಉಜಿರೆ
ಚಿತ್ರ: ವಿಟ್ಟು ಪ್ರಸನ್ನ