ವನಭಕ್ತಿ ಮೂಡಿಸುವ “ತೀರ್ಥಂಕರ ವನ”

ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ವಿಶೇಷವಾಗಿ ಜೈನ ಧರ್ಮದ 24 ತೀರ್ಥಂಕರರು ತಪಸ್ಸು ಕುಳಿತು ಮೋಕ್ಷ ಹೋದ ವಿವಿಧ ಬಗೆಯ ಗಿಡಗಳು ಜನರನ್ನು ಆಕರ್ಷಿಸುತ್ತಿದ್ದವು.
ಈ ಮರಗಳು ಒಂದೊಂದು ತೀರ್ಥಂಕರರಿಗೆ ಒಂದೊಂದು ರೀತಿಯ ಮರಗಳಿವೆ. ಇದರಲ್ಲಿ ಕೆಲವು ಮರದ ಕೊಂಬೆ ಮತ್ತು ಗಿಡಗಳನ್ನು ಕಾಡಿನಿಂದ ತರಲಾಗಿದೆ. ಆಗುಂಬೆ ಕಾಡಿನಿಂದ ಹಿಡಿದು ನಾರಾವಿಯಲ್ಲಿ ಇರುವ ತೀರ್ಥಂಕರ ವನದಿಂದ ಗಿಡಗಳನ್ನು ಸಂಗ್ರಹಿಸಲಾಗಿದೆ.
ಆದಿನಾಥ ತೀರ್ಥಂಕರರಿಂದ ಮಹಾವೀರ ಸ್ವಾಮಿಯವರೆಗೆ ಇಲ್ಲಿ ಗಿಡಗಳನ್ನು ಸಂಗ್ರಹಿಸಲಾಗಿದೆ. ಇದೇ ಮೊದಲ ಬಾರಿಗೆ ಮಹಾಮಸ್ತಕಾಭೀಷೆಕ ಸಂದರ್ಭದಲ್ಲಿ ಇಂತಹ ಒಂದು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಪ್ರತೀ ತೀರ್ಥಂಕರರನ್ನು ಸ್ಮರಿಸುವಂತಹ ತೀರ್ಥಂಕರ ವನ ಭಕ್ತಿಮೂಡಿಸುವಂತಿದೆ.
ಮೊದಲ ತೀರ್ಥಂಕರರಾದ ಆದಿನಾಥ ಸ್ವಾಮಿಯು ಕೈಲಾಸ ಪರ್ವತದಲ್ಲಿ ವಟ ವೃಕ್ಷದ ಕೆಳಗೆ ತಪ್ಪಸ್ಸು ಮಾಡಿ ಮೋಕ್ಷವನ್ನು ಪಡೆದರು. 12ನೇ ತೀರ್ಥಂಕರ ವಾಸುಪೂಜ್ಯ ಚಂಪಾಪುರಿಯಲ್ಲಿ ಕದಂಬಿ ವೃಕ್ಷದ ಕೆಳಗೆ ಮೋಕ್ಷ ಪಡೆದರು. ಕೊನೆಯ ತೀರ್ಥಂಕರ ಮಹಾವೀರ ಶಾಲ್ಮಲಿ ವೃಕ್ಷದ ಕೆಳಗೆ ಹಾಗೇಯೇ ಉಳಿದ 20 ತೀರ್ಥಂಕರರು ಅಯೋಧ್ಯೆ ಸಮ್ಮೇಧ ಶಿಖರ್ಜಿಯಲ್ಲಿ ವಿವಿಧ ವೃಕ್ಷಗಳ ಕೆಳಗೆ ಮೋಕ್ಷವನ್ನು ಪಡೆದರು. ಇವೆಲ್ಲದರ ಸಾಂಕೇತಿಕವಾಗಿ ಧರ್ಮಸ್ಥಳದ ತೀರ್ಥಂಕರ ವನದಲ್ಲಿ ವಿವಿಧ ವೃಕ್ಷವನ್ನು ಸಂಯೋಜನೆಗೊಳಿಸಲಾಗಿದೆ.


ಒಂದೇ ರೀತಿಯಲ್ಲಿ ಕಾಣುವ ಈ ಮೂರ್ತಿಗಳು ನೋಡುಗರಿಗೆ 24 ತೀರ್ಥಂಕರರಲ್ಲಿ ಯಾವ ತೀರ್ಥಂಕರರು ಎಂದು ಗುರುತಿಸುವುದು ಕಷ್ಟ. ಆದರೆ ಈ ವಿಗ್ರಹಗಳ ಕೆಳಗೆ ಆಯಾ ತೀರ್ಥಂಕರರ ಲಾಂಛನ ಮತ್ತು ಮರದ ಹೆಸರುಗಳು ಇರುವುದರಿಂದ ಸುಲಭವಾಗಿ ಗುರುತಿಸಬಹುದಾಗಿದೆ. ಇದರಿಂದ ಇಲ್ಲಿ ಲಾಂಛನ ಮತ್ತು ಮರದ ಹೆಸರಿರುವುದರಿಂದ ಸುಲಭವಾಗಿ ಗುರುತಿಸಬಹುದಾಗಿದೆ.
-ಸ್ವಸ್ತಿಕಾ ಜೈನ್
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಮ್ ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಜಿರೆ